`ಕಿಸ್' ಪಡೆಯಲು ಯಾರು ಸಿದ್ದ
Posted date: 07 Thu, Jul 2016 – 09:56:08 AM

ಅಪ್ಪಟ ಕನ್ನಡದ ಹುಡುಗಿ ಕಿಸ್ ಮಾಡಲು ಯಾರು ಸಿದ್ದ ಇದ್ದೀರಾ ಎಂದು ಜನಪ್ರಿಯ ನಿರ್ದೇಶಕ ಎ ಪಿ ಅರ್ಜುನ್ ಅವರು ಕೇಳುತ್ತಾ ಇದ್ದಾರೆ. ಕಿಸ್ ಅಂದಾಕ್ಷಣ ಯಾವ ಮುಜುಗರ ಬೇಕಾಗಿಲ್ಲ. ಎ ಪಿ ಅರ್ಜುನ್ ಅವರ ಕಿಸ್ ಅಂದರೆ – ಕೀಪ್ ಇಟ್ ಸಿಂಪಲ್ ಅಂಡ್ ಶಾರ್ಟ್ ಎಂದು ಅರ್ಥ. ಈ ವರ್ಷದ ಪ್ರೇಮಿಗಳ ದಿನ ಸೆಟ್ಟೇರಿದ ಕಿಸ್ ಚಿತ್ರಕ್ಕೆ ಜನಪ್ರಿಯ ಕಿರುತೆರೆ ನಟ ವಿರಾಟ್ (ಜೊತೆ ಜೊತೆಯಲಿ ಧಾರಾವಾಹಿ) ಆಯ್ಕೆ ಆಗಿದ್ದಾರೆ. ಈಗ ನಿರ್ದೇಶಕರಿಗೆ ಬೋಲ್ಡ್ ಅಂಡ್ ಡ್ಯಾಷಿಂಗ್ ಸುಂದರ ಹುಡುಗಿ ಪ್ರತಿಭೆಯುಳ್ಳ ನಾಯಕಿ ಬೇಕಾಗಿದೆ. ಇದೊಂದು ಸುಂದರ ಅವಕಾಶ ಎನ್ನುತ್ತಾರೆ ನಿರ್ದೇಶಕ ಎ ಪಿ ಅರ್ಜುನ್.

ಬರುವ ಆಗಸ್ಟ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭ ಮಾಡಲು ರಾಷ್ಟ್ರ ಕೂಟ ಪಿಕ್ಚರ್ಸ್ ನಿರ್ಮಾಪಕ ವಿ ರವಿಕುಮಾರ್ ಅವರು ಸಿದ್ದವಾಗಿದ್ದಾರೆ. ಮೂಲತಃ ಉಧ್ಯಮಿಯಾದ ರವಿಕುಮಾರ್ ಅವರು ತಮ್ಮ ಚಿಕ್ಕ ವಯಸ್ಸಿನ ಕನಸು ಕನ್ನಡ ಸಿನಿಮಾ ತಯಾರಿಸುವುದನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ.

 ಕನ್ನಡ ಚಿತ್ರರಂಗದಲ್ಲಿ ಅಂಬಾರಿ, ಅದ್ಧೂರಿ, ರಾಟೆ ಹಾಗೂ ಐರಾವತ ಎಂಬ ಸಿನಿಮಾಗಳನ್ನು ನೀಡಿದ ಎ ಪಿ ಅರ್ಜುನ್ ಅವರು ಕಿಸ್ ಎಂಬ ಚಿತ್ರದಲ್ಲಿ ಬಹಳಷ್ಟು ವಿಚಾರಗಳನ್ನು ಅಡಗಿಸಿಟ್ಟಿದ್ದಾರೆ.

 ಕಿಸ್’....ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಆಸ್ಟ್ರೇಲಿಯ ದೇಶದಲ್ಲಿ ಚಿತ್ರೀಕರಣ ಮಾಡಲಾಗುವುದು.

 ಕಿಸ್ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ, ಗಿರೀಷ್ ಗೌಡ ಅವರ ಛಾಯಾಗ್ರಹಣ, ಡಾ ಕೆ ರವಿ ವರ್ಮ ಅವರ ಸಾಹಸ, ದೀಪು ಎಸ್ ಕುಮಾರ್ ಅವರ ಸಂಕಲನ ಮಾಡಲಿದ್ದಾರೆ. Contact -AP Arjun  kiss@gmail.com

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed